Thursday, 5 December 2013

ಕುಂಭಾಶಿ : ದಂತ ಪಂಕ್ತಿ ಜೋಡಣೆ ಶಿಬಿರ

         ಒಂದೇ ದಿನದಲ್ಲಿ ದಂತ ಪಂಕ್ತಿಯನ್ನು ಜೋಡಿಸಿ ರೋಗಿಗಳಲ್ಲಿ ನಗುವಿನ ಗೆಲುವನ್ನು ಬೀರಿದ ಇದೊಂದು ಅಪೂರ್ವ ಕಾರ್ಯಕ್ರಮ ಎಂದು ಮಂಗಳೂರು ಎ.ಬಿ.ಶೆಟ್ಟಿ ದಂತ ಮಹಾವಿದ್ಯಾಲಯದ ಉಪ ಕುಲಪತಿ ಡಾ.ರಮಾನಂದ ಶೆಟ್ಟಿ ಹೇಳಿದರು.
     ಅವರು ರವಿವಾರ ಕುಂಭಾಶಿ ವಿನಾಯಕ ಸಭಾಗೃಹದಲ್ಲಿ ಕೋಟೇಶ್ವರ ರೋಟರಿ ಕ್ಲಬ್ ಹಾಗೂ ಮಂಗಳೂರು ಎ.ಬಿ.ಶೆಟ್ಟಿ ದಂತ ಮಹಾವಿದ್ಯಾಲಯದ ಪ್ರೋಸ್ತೊಡಾಂಟಿಕ್ಸ್ ವಿಭಾಗದ ಆಶ್ರಯದಲ್ಲಿ ಆಯ್ದ ಫಲಾನುಭವಿಗಳಿಗೆ ದಂತ ಪಂಕ್ತಿ ಜೋಡಿಸುವ ಶಿಬಿರ ಉದ್ಘಾಟಿಸಿ ಮಾತನಾಡಿದರು.
    ಕೋಟೇಶ್ವರ ರೋಟರಿ ಕ್ಲಬ್ ಅದ್ಯಕ್ಷ ಪ್ರಭಾಕರ ಕುಂಭಾಸಿ ಅದ್ಯಕ್ಷತೆ ವಹಿಸಿದ್ದರು.ಮಂಗಳೂರು ಎ.ಬಿ.ಶೆಟ್ಟಿ ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ರಾಜಂದ್ರಪ್ರಸಾದ್,ಪ್ರೊರೋಡಾಂಟಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಕೃಷ್ಣಪ್ರಸಾದ್,ಭಾರತ ಸೇವಾದಳ ಜಿಲ್ಲಾ ಕಾರ್ಯದರ್ಶಿ ಮಹಾಬಲ ಕುಂದರ್,ರೋಟರಿ ಸಹಾಯಕ ಗವರ್ನರ್ ಟಿ.ಕೆ.ಎಂ.ಭಟ್,ರೋಟರಿ ಕ್ಲಬ್ ಕಾರ್ಯದರ್ಶಿ ರವೀಂದ್ರ ಶೆಟ್ಟಿ,ದಬ್ಬೆಕಟ್ಟೆ ದಂತ ಚಿಕಿತ್ಸಾ ಕೇಂದ್ರದ ಡಾ.ಮೈತ್ರಿ ನಾಯ್ಕ.ಡಾ.ರೇಶ್ಮಾ,ರೋಟರಿ ವಲಯ ಲೆಫ್ಟಿನೆಂಟ್ ಕೆ.ಆರ್.ನಾಯ್ಕ.ಸಮುದಾಯ ನಿರ್ದೇಶಕ ಸದಾನಂದ ಉಪಸ್ಥಿತರಿದ್ದರು.
     ಪ್ರಭಾಕರ್ ಕುಂಭಾಶಿ ಸ್ವಾಗತಿಸಿದರು.ರೋಟರಿ ಡೆಂಟಲ್ ಕೇರ್ ಚೇರಮೆನ್ ಗಣೇಶ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ರವೀಂದ್ರ ನಾವಡ ಕಾರ್ಯಕ್ರಮ ನಿರ್ವಹಿಸಿದರು.ನಾಗೇಶ್ ಶೆಟ್ಟಿಗಾರ್ ವಂದಿಸಿದರು.

No comments:

Post a Comment